ದುರ್ಯೋಧನನ ಮಗ; ರಥಿಕ. ಅಪಾರ ಮನಃಸ್ಥೈರ್ಯವಿದ್ದ ವೀರ. ಕೌರವ ಪಾಂಡವರಿಗೆ ಯುದ್ಧವಾದಾಗ ಎರಡನೆಯ ದಿವಸ ಅಭಿಮನ್ಯುವನ್ನು ಎದುರಿಸಿದ. ಅಭಿಮನ್ಯು ಅಪಾರ ಶೌರ್ಯವನ್ನು ಪ್ರದರ್ಶಿಸುತ್ತಾ ಹೋರಾಟ ನಡೆಸಿದ. ಅವನ ಹೊಡೆತಕ್ಕೆ ನೂರಾರು ರಾಜಪುತ್ರರು ಸತ್ತರು. ದುರ್ಯೋಧನನೇ ಮೊದಲಾದ ವೀರರು ಹೆದರಿ ಪಲಾಯನ ಮಾಡಿದರು. ಆದರೆ ಲಕ್ಷ್ಮಣ ಮಾತ್ರ ಎದೆಗುಂದದೆ ಆತನನ್ನು ಪ್ರತಿಭಟಿಸಿ ನಿಂತ. ಶಸ್ತ್ರಾಸ್ತ್ರಗಳಿಂದ ಮುಚ್ಚಿಬಿಟ್ಟ. ಯುದ್ಧದ 13ನೆಯ ದಿನ ಅಭಿಮನ್ಯು ಪ್ರಯೋಗಿಸಿದ ಭಯಂಕರ ಬಾಣದಿಂದ ಈತನ ಶಿರಸ್ಸು ಕತ್ತರಿಸಿ ಬಿದ್ದು ಮರಣಹೊಂದಿದ.    

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ